ಉಡುಪಿ ಜಿಲ್ಲಾ ಕಸಾಪಕ್ಕೆ ಹೊಸ ನೇತೃತ್ವ ಬೇಕು: ವಾಸುದೇವ ಭಟ್ ಪೆರಂಪಳ್ಳಿ
ಉಡುಪಿ: ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗಳು ಸಮೀಪಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಕಸಾಪಕ್ಕೆ ಹೊಸ ನೇತೃತ್ವದ ಅಗತ್ಯವಿದೆ ಎಂದು ಕಸಾಪ ಸಾಮಾನ್ಯ ಸದಸ್ಯ, ಸಾಮಾಜಿಕ ಕಾರ್ಯಕರ್ತ ಜಿ. ವಾಸುದೇವ ಭಟ್ ಪೆರಂಪಳ್ಳಿ ಅಭಿಪ್ರಾಯಪಟ್ಟಿದ್ದಾರೆ. ಹಾಲಿ ಅಧ್ಯಕ್ಷರು ಮತ್ತು ಅವರ ತಂಡ ಎರಡು ಅವಧಿಯಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಆ ಬಗ್ಗೆ ಯಾವುದೇ ಸಂದೇಹವೇ ಇಲ್ಲ. ಆದರೆ ಯಾವುದೇ ಸಂಘ ಸಂಸ್ಥೆಯಲ್ಲಿ ಚಲನಶೀಲತೆ ಮತ್ತು ಹೊಸ ಚಿಂತನೆ, ಹೊಸ ಉತ್ಸಾಹ, ಹೊಸ ಯೋಚನೆಗಳು ನಿರಂತರವಾಗಿ ಮೂಡಿಬರಬೇಕು. […]