ಉಡುಪಿ ಜಿಲ್ಲೆ: ಕೊರೋನಾ ಭೀತಿಯ ನಡುವೆ ತಂಪೆರೆದ ಮಳೆರಾಯ

ಉಡುಪಿ: ಕೊರೋನಾ ಭೀತಿಯ ನಡುವೆ ಉಡುಪಿ ಜಿಲ್ಲೆಯಾದ್ಯಂತ ಮಳೆರಾಯ ತಂಪೆರೆದಿದ್ದಾನೆ ಉಡುಪಿ, ಕುಂದಾಪುರ, ಹೆಬ್ರಿ, ಕಾರ್ಕಳ ಸೇರಿದಂತೆ ಜಿಲ್ಲೆಯ ವಿವಿದೆಡೆ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗಿದೆ. ಮನೆಯಲ್ಲೇ ಗೃಹಬಂಧನದಲ್ಲಿದ್ದ ಜನರು ಮನೆಯಿಂದ ಹೊರಗೆ ಬಂದು ಮೊದಲ ಮಳೆಯಲ್ಲಿ ನೆನೆದು ಖುಷಿಪಟ್ಟಿದ್ದಾರೆ. ಕೊರೋನಾ ಭೀತಿಯ ನಡುವೆ ಸುರಿದ ಭಾರೀ ಮಳೆಗೆ ಜಿಲ್ಲೆಯ ಅಲ್ಲಲ್ಲಿ ಹಾನಿಯುಂಟಾಗಿದೆ.ಜಿಲ್ಲೆಯಲ್ಲಿ ಕಳೆದ ಮೂರು ದಿನದಿಂದ ಮೋಡ ಕವಿದ ವಾತಾವರಣವಿತ್ತು. ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ನಾಳೆಯೂ ಮಳೆ ಸುರಿಯುವ ಸಾಧ್ಯತೆ ಇದೆ ಎನ್ನಲಾಗಿದೆ. (ಚಿತ್ರ:ಶ್ರೀಕಾಂತ್ […]