ನಮ್ಮಪ್ಪ ಸಿದ್ದರಾಮಯ್ಯರ ರೈಟ್ ಹ್ಯಾಂಡ್: ಕಂಠಪೂರ್ತಿ ಕುಡಿದು ಮಣಿಪಾಲ ವೈದ್ಯಕೀಯ ವಿದ್ಯಾರ್ಥಿಯಿಂದ ಪೊಲೀಸರಿಗೆ ಧಮ್ಕಿ
ಉಡುಪಿ: ಮದ್ಯಪಾನ ಮಾಡಿ ಕಾರು ಚಾಲನೆ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ಸಂಚಾರಿ ಪೊಲೀಸರು ತಡೆದು ನಿಲ್ಲಿಸಿ, ಫೈನ್ ಹಾಕಲು ಮುಂದಾದಾಗ ಆತ ಪೊಲೀಸರಿಗೆ ಆವಾಜ್ ಹಾಕಿದ ಘಟನೆ ಉಡುಪಿಯ ಕಲ್ಸಂಕ ಜಂಕ್ಷನ್ ಬಳಿ ಇಂದು ನಡೆದಿದೆ. ಆಂಧ್ರಪ್ರದೇಶ ಮೂಲದ ಅನುರಾಗ ರೆಡ್ಡಿ ಎಂಬಾತ ಪೊಲೀಸರಿಗೆ ಆವಾಜ್ ಹಾಕಿದ ವಿದ್ಯಾರ್ಥಿ. ಈತ ಮಣಿಪಾಲ ವಿವಿಯ ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾನೆ. ಪೊಲೀಸರು ಈತನ ಕಾರು ನಿಲ್ಲಿಸಿ ಪರಿಶೀಲನೆ ನಡೆಸಿದ್ದು, ಆಲ್ಕೋಮೀಟರ್ ನಲ್ಲಿ ಕುಡಿತದ ಪ್ರಮಾಣ ಪತ್ತೆಯಾಗಿದೆ. ಹೀಗಾಗಿ ಕಾನೂನಿನಂತೆ ಪೊಲೀಸರು ದಂಡ ಹಾಕಲು […]