ಪಡುತೋನ್ಸೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಉಡುಪಿ: ಕೆಮ್ಮಣ್ಣು ಪಡುತೋನ್ಸೆಯ ಕುದುರು ನೆಕ್ಸ್ಟ್ ಹೊಳೆಯಲ್ಲಿ ವ್ಯಕ್ತಿಯ ಶವ. ಪತ್ತೆಯಾಗಿದೆ. ಮೃತವ್ಯಕ್ತಿಯನ್ನು ಬಾಲು ನಾಯ್ಕ್ ಎಂದು ಗುರುತಿಸಲಾಗಿದೆ. ಹೊಳೆಯಿಂದ ಶವ ಮೇಲೆತ್ತಲು ಅಲ್ವಿನ್, ಹರಿದಾಸ್, ನಿಖಿಲ್, ಸತ್ಯ ಅವರು ಸಹಕರಿಸಿದರು. ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಶವವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದರು. ಮಲ್ಪೆ ಠಾಣೆಯ ಎಎಸ್ಐ ವಿಶ್ವನಾಥ್, ನಾಗರಾಜ್ ಸ್ಥಳಕ್ಕೆ ಬಂದು ಮಹಜರು ಪ್ರಕ್ರಿಯೆ ನಡೆಸಿದರು.