ಉಡುಪಿ: ಮಿತಿ ಮೀರಿದ ಟೇಸ್ಟಿ ಪೌಡರ್ ಬಳಸಿದ್ದಲ್ಲಿ ಕ್ರಿಮಿನಲ್ ಕೇಸ್; ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ
ಉಡುಪಿ: ಜಿಲ್ಲೆಯಲ್ಲಿ ಯಾವುದೇ ಬಗೆಯ ಆಹಾರ ತಯಾರಿಕೆಯಲ್ಲಿ ಮಿತಿ ಮೀರಿದ ಟೇಸ್ಟಿ ಪೌಡರ್ ಬಳಕೆ ಕಂಡುಬಂದಲ್ಲಿ ಅಂತಹ ಆಹಾರ ತಯಾರಕರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ. ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಆಹಾರ ಸುರಕ್ಷತೆ ಕುರಿತ ಜಿಲ್ಲಾ ಮಟ್ಟದ ಸಲಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೋಬಿಮಂಚೂರಿ, ಚೈನೀಸ್ ತಿನಿಸುಗಳು ಮುಂತಾದ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ರುಚಿಯ ಹೆಚ್ಚಳಕ್ಕೆ ಟೇಸ್ಟಿ ಪೌಡರ್‌ನ ಬಳಕೆ ನಡೆಯುತ್ತಿದೆ. ಆದರೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ […]