ಸದ್ಯ ಉಡುಪಿ ಜಿಲ್ಲೆಯಲ್ಲಿ ಲಾಕ್ ಡೌನ್ ಬೇಡ: ರಘುಪತಿ ಭಟ್
ಉಡುಪಿ: ಜಿಲ್ಲೆಯಲ್ಲಿ ಲಾಕ್ಡೌನ್ ಸದ್ಯಕ್ಕಿಲ್ಲ. ಮತ್ತೆ ಲಾಕ್ಡೌನ್ ನಿಂದ ಈಗಾಗಲೇ ಆರ್ಥಿಕತೆಯ ಮೇಲೆ ಹೊಡೆತ ಬಿದ್ದಿದೆ. ಇನ್ನು ಮತ್ತೆ ಲಾಕ್ ಡೌನ್ ಮಾಡಿದರೆ ಭಾರಿ ಹೊಡೆತ ಬೀಳಲಿದೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ. ಅವರು ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಲಾಕ್ ಡೌನ್ ಮಾಡದೇ ಜಿಲ್ಲೆಯ ಒಳಗಡೆ ಪರಿಸ್ಥಿತಿಯನ್ನು ನಿಯಂತ್ರಿಸುವುದು ಸುಲಭವಿದೆ. ಆದರೆ ಪರ ಜಿಲ್ಲೆ ಸೋಂಕಿತರೇ ಬಹಳ ದೊಡ್ಡ ಸವಾಲಾಗಿದ್ದಾರೆ ಎಂದರು. ಜಿಲ್ಲೆಯ ಗಡಿ ಭಾಗಗಳನ್ನು ಸೀಲ್ ಡೌನ್ ಮಾಡು ಯೋಚನೆ ಇದೆ. […]