ಉಡುಪಿ: ಕಾಂಕ್ರೀಟ್ ಕಾಮಗಾರಿ; ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ
ಉಡುಪಿ: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಕೈಗೊಳ್ಳುತ್ತಿರುವ ಪಳ್ಳಿ-ಕಣಜಾರು ಗುಡ್ಡೆಯಂಗಡಿ ರಸ್ತೆ ವಯಾ ರಂಗನಪಲ್ಕೆ ರಸ್ತೆಯ 8.20 ಕಿ.ಮೀ ಉದ್ದದ ಕಾಂಕ್ರೀಟ್ ಕಾಮಗಾರಿಗೆ ಸ್ಥಳಾವಕಾಶದ ಕೊರತೆ ಹಾಗೂ ಹಳ್ಳಿಯ ಪರಿಮಿತಿ ಇರುವುದರಿಂದ, ಸದರಿ ರಸ್ತೆಯಲ್ಲಿ ಫೆಬ್ರವರಿ 8 ರ ವರೆಗೆ ವಾಹನ ಸಂಚಾರ ನಿರ್ಬಂಧಿಸಿ, ಪಳ್ಳಿ-ನಿಂಜೂರು ಜಂಕ್ಷನ್ನಿಂದ ಜೀವನ್ ಜ್ಯೋತಿ ಮಾರ್ಗವಾಗಿ ಬೈಲೂರು ಉಡುಪಿ ಕಡೆ ಪರ್ಯಾಯ ಮಾರ್ಗದಲ್ಲಿ ಸಂಚಾರ ವ್ಯವಸ್ಥೆ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೂರ್ಮಾರಾವ್ ಎಂ ಆದೇಶಿಸಿರುತ್ತಾರೆ.