ಉಡುಪಿ: ಗಗನಕ್ಕೇರಿದ ತೆಂಗಿನಕಾಯಿ ದರ; ಗ್ರಾಹಕರು ಕಂಗಾಲು

ಉಡುಪಿ: ಸಾಲು ಸಾಲು ಹಬ್ಬಗಳು ಸಮೀಪಿಸುತ್ತಿವೆ. ನವರಾತ್ರಿಯ ಹೊಸ್ತಿಲಲ್ಲಿ ತೆಂಗಿನ ದರ ಗಗನಕ್ಕೇರಿದೆ. ಪ್ರತಿ ಕೆಜಿ ತೆಂಗಿನಕಾಯಿಗೆ 50 ರೂಪಾಯಿ ನೀಡಬೇಕಾಗಿದೆ. ಪ್ರತಿಕೂಲ ಹವಾಮಾನ ಹಾಗೂ ರೋಗ ಬಾಧೆಗಳಿಂದ ತೆಂಗಿನ ಇಳುವರಿಗೆ ಹಿನ್ನಡೆಯಾಗಿದೆ. ಇನ್ನು ಕೆಲವು ದಿನಗಳಲ್ಲಿ ತೆಂಗಿನ ದರ ಮತ್ತಷ್ಟು ಏರುವ ಸಾಧ್ಯತೆಗಳಿವೆ. ತೆಂಗಿನಕಾಯಿಗೆ ಕೆಜಿಗೆ 50 ರೂಪಾಯಿ ತಲುಪಿದ್ದು ಕರಾವಳಿಯಲ್ಲಿ ಇದೇ ಮೊದಲು. ಈವರೆಗೆ ಅತಿಹೆಚ್ಚೆಂದರೆ 42 ರೂಪಾಯಿ ದರ ಇತ್ತು. ಹಿಂದೆಂದೂ ಕಂಡಿರದ ದರ ಏರಿಕೆ ಗ್ರಾಹಕನ್ನು ಕಂಗಾಲು ಮಾಡಿದೆ.ಪ್ರತಿಕೂಲ ಹವಾಮಾನದಿಂದ ತೆಂಗಿನ […]