ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ವಾರ್ಷಿಕ ಸಾಮಾನ್ಯ ಸಭೆ

ಉಡುಪಿ: ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನ 2023-24ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅವರ ಅಧ್ಯಕ್ಷತೆಯಲ್ಲಿ ಅಜ್ಜರಕಾಡಿನ ಪುರಭವನದಲ್ಲಿ ಇಂದು ನಡೆಯಿತು. ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ‌ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ 2.10 ಕೋಟಿ ರೂ. ಶಿಕ್ಷಣ ನಿಧಿಯನ್ನು ಸಂಗ್ರಹಿಸಿ ಸಹಕಾರಿ ಮಹಾಮಂಡಲಕ್ಕೆ ನೀಡಿದ್ದೇವೆ. ಹೆಚ್ಚಿನ ಜಿಲ್ಲೆಗಳಲ್ಲಿ ಸಹಕಾರಿ ಸಂಸ್ಥೆಗಳು ನಷ್ಟದಲ್ಲಿದ್ದು, ಯಾವುದೇ ವ್ಯವಹಾರ ಮಾಡುತ್ತಿಲ್ಲ. ಹೀಗಾಗಿ ಯಾವ ಜಿಲ್ಲೆಗಳು ಹೆಚ್ಚು ಶಿಕ್ಷಣ ನಿಧಿ ಸಂಗ್ರಹಿಸುತ್ತವೆಯೋ ಅಂತಹ […]