ಸಿಎನ್‌ಜಿ ಇಂಧನ ಕೊರತೆ; ಆಟೋ ಚಾಲಕರ ಪರದಾಟ!

ಉಡುಪಿ: ಸಿಎನ್‌ಜಿ ಇಂಧನ ಆಧಾರಿತ ವಾಹನಗಳು ಮತ್ತು ರಿಕ್ಷಾಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ, ಅದಕ್ಕೆ ಅನುಗುಣವಾಗಿ ಸಿಎನ್‌ಜಿ ಪೂರೈಕೆ ಬಂಕ್ ಗಳು ಇಲ್ಲದ ಕಾರಣ ಆಗಾಗ ಇಂಧನ ಕೊರತೆ ಎದುರಾಗುತ್ತಿದೆ. ಇದರಿಂದಾಗಿ ರಿಕ್ಷಾ ಚಾಲಕರು ಭಾರೀ ಸಮಸ್ಯೆ ಎದುರಿಸುತ್ತಿದ್ದು, ಬಾಡಿಗೆ ಬಿಟ್ಟು ಬಂಕ್‌ಗಳ ಮುಂದೆ ದಿನವಿಡೀ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಕೆಲವು ದಿನಗಳಿಂದ ಈ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದ್ದು, ವಾಹನ ಚಾಲಕರು ಗ್ಯಾಸ್‌ ಸಿಗದೆ ಪರದಾಡುವಂತಾಗಿದೆ. ಇದಕ್ಕೆ ದಸರಾ ರಜೆ ನಿಮಿತ್ತ ರಾಜ್ಯದ […]