ಉಡುಪಿ: ಮಕ್ಕಳ ಅಚ್ಚುಮೆಚ್ಚಿನ ಸರೋಜ ಟೀಚರ್ ನಿಧನ
ಉಡುಪಿ: ಒಳಕಾಡು ಅಂಗನವಾಡಿ ಶಾಲೆಯ ನಿವೃತ್ತ ಶಿಕ್ಷಕಿ ಸರೋಜ (64 ) ಅಸೌಖ್ಯದಿಂದ ಮಂಗಳವಾರ ನಿಧನ ಹೊಂದಿದರು. ನಿವೃತ್ತಿ ಬಳಿಕ ಕುಕ್ಕಿಕಟ್ಟೆ ವಿದ್ಯಾರ್ಥಿ ನಿಲಯದಲ್ಲಿ ಉದ್ಯೋಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರಮೋದ್ ಕುಮಾರ್ ಅವರ ಮಾರ್ಗದರ್ಶನದಂತೆ, ತಕ್ಷಣ ಸ್ಪಂದಿಸಿದ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ತಮ್ಮ ಆಂಬುಲೆನ್ಸ್ ವಾಹನದಲ್ಲಿ ಶವಸಾಗಿಸಿ ಶವಗಾರದಲ್ಲಿ ರಕ್ಷಿಸಿ ಇಡಲು ವ್ಯವಸ್ಥೆಗೊಳಿಸಿದ್ದಾರೆ. ಯಶೋಧಾಮ ಆಟೋ ಯೂನಿಯನ್ ನ ಆಟೊ ಚಾಲಕರು ಸಹಕರಿಸಿದರು.