ಉಡುಪಿ: ಪಾದಾಚಾರಿ ಮಾರ್ಗದಲ್ಲಿ ಕಾರು, ಬೈಕ್ ಗಳ ದರ್ಬಾರ್; ಜನರು ನಡು ರಸ್ತೆಯಲ್ಲೇ ನಡೆದಾಡ ಬೇಕಾದ ದುಸ್ಥಿತಿ.!!
ಉಡುಪಿ: ನಗರಸಭೆ ಕಚೇರಿ ಮುಂಭಾಗದಲ್ಲಿ ಹಾದುಹೋಗುವ ಕವಿ ಮುದ್ದಣ ಮಾರ್ಗ ರಸ್ತೆಯ ಪಾದಾಚಾರಿ ರಸ್ತೆಯಲ್ಲಿ ವಾಹನಗಳ ದರ್ಬಾರ್ ನಡೆಯುತ್ತಿದೆ. ಅಂಗಡಿ, ಗೂಡಾಂಗಡಿ ಮಾಲೀಕರು ಪಾದಾಚಾರಿ ರಸ್ತೆಯನ್ನು ಆಕ್ರಮಿಸಿಕೊಂಡಿದ್ದಾರೆ. ಇದರಿಂದ ಪಾದಾಚಾರಿಗಳು ನಡು ರಸ್ತೆಯಲ್ಲೇ ಓಡಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಇಲ್ಲಿ ಪಾದಚಾರಿಗಳ ಸುಗಮ ನಡಿಗೆಗೆ ತೊಂದರೆಯಾಗಿದ್ದು, ಸದಾ ವಾಹನ ದಟ್ಟಣೆಯಿಂದ ಕೂಡಿರುವ ಈ ರಸ್ತೆಯಲ್ಲಿ ಪಾದಾಚಾರಿಗಳು ಸಂಚರಿಸಬೇಕಾದರೆ ಹರಸಾಹಸ ಪಡಬೇಕಾದ ಪರಿಸ್ಥಿತಿ ಎದುರಾಗಿದೆ. ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಸಾರ್ವಜನಿಕರು ಬಹಳಷ್ಟು ತೊಂದರೆ ಅನುಭವಿಸವಂತಾಗಿದೆ. ಹೀಗಾಗಿ ನಗರಸಭೆ ಅಧಿಕಾರಿಗಳು ಕೂಡಲೇ […]