ಉಡುಪಿ: ಕಡಲ ತೀರದಲ್ಲಿ ಎಲ್ಲಿ ನೋಡಿದರೂ ಕಸದ ರಾಶಿ
ಉಡುಪಿ: ಉಡುಪಿಯಲ್ಲಿ ಸುರಿಯುತ್ತಿರುವ ಮಳೆಯ ತೀವ್ರತೆ ಅರಿವಿಗೆ ಬರಬೇಕಾದರೆ ಕಡಲ ತೀರಗಳಿಗೆ ಭೇಟಿ ಕೊಡಬೇಕು. ಊರಿನ ಕಸವನ್ನೆಲ್ಲ ನದಿಗಳು ಹೊತ್ತು ತಂದು ಸಮುದ್ರಕ್ಕೆ ಹಾಕುತ್ತಿವೆ. ಕಡಲಲ್ಲಿ ನೀರಿನ ಅಬ್ಬರ ಹೆಚ್ಚಿದ್ದಾಗ ಈ ಕಸದ ರಾಶಿ ಬಂದು ದಡ ಸೇರುತ್ತಿದೆ. ಇತ್ತೀಚಿನ ದಿನಗಳಲ್ಲಿ ಕಡಲಿನ ಆರ್ಭಟ ಜೋರಾಗಿದೆ. ಹೀಗಾಗಿ ಕಡಲ ಆಳಕ್ಕೆ ಸೇರಿದ ಕಸವೆಲ್ಲ ಬಂದು ತೀರ ಪ್ರದೇಶದಲ್ಲಿ ಸಂಗ್ರವಾಗುತ್ತಿದೆ. ಪ್ರತಿ ಮಳೆಗಾಲದಲ್ಲೂ ಈ ರೀತಿ ಕಸದ ಗುಡ್ಡವೆ ಬಂದು ಸೇರುತ್ತದೆ. ಕಡಲು ತನ್ನೊಳಗೆ ಏನನ್ನು ಇರಿಸಿಕೊಳ್ಳುವುದಿಲ್ಲ ಎಂಬ […]