ಮನುಷ್ಯ ದೀರ್ಘ ದ್ವೇಷಿ ಆಗಿರಬಾರದು

ಉಡುಪಿ: ವ್ಯಕ್ತಿಗೆ ಕೋಪ ಬರುವುದು ಸಹಜ. ಆದ್ರೆ ಅದು ತಕ್ಷಣಕ್ಕೆ ಮಾತ್ರ ಇರಬೇಕು. ಮನುಷ್ಯ ಯಾವತ್ತೂ ದೀರ್ಘ ದ್ವೇಷಿ ಆಗಿರಬಾರದು. ಈ‌ ಸಾಮರಸ್ಯ ಜೀವನದಲ್ಲಿ ಇದ್ದಾಗ ಬಾಂಧವ್ಯ ಸದಾ ಗಟ್ಟಿಯಾಗಿರುತ್ತದೆ ಎಂದು ಯಕ್ಷಗುರು ಸಂಜೀವ ಸುವರ್ಣ ಅಭಿಪ್ರಾಯಪಟ್ಟರು. ಉಡುಪಿ ಬುಡ್ನಾರ್ ಯಕ್ಷ ಸಂಜೀವ ಯಕ್ಷಗಾನ ಕೇಂದ್ರದಲ್ಲಿ ಆಯೋಜಿಸಿದ “ಸಂಜೀವ-70 ಗುರು ಶಿಷ್ಯರ ಸಂವಾದ”ದಲ್ಲಿ ತಮ್ಮ ಯಕ್ಷಗಾನ ಜೀವನದ ಸಂಗತಿಗಳನ್ನು ಹಂಚಿಕೊಂಡರು. ನನ್ನ ಹುಟ್ಟು ಹಾಗೂ ಬದುಕು ವಿಚಿತ್ರವೇ ಆಗಿದೆ. ಬೇರೆಯವರಿಂದ ಪಡೆದದ್ದೇ ಹೆಚ್ಚು ಸಮಾಜಕ್ಕೆ ನೀಡಿದ್ದು ಕಡಿಮೆ. […]