ಉಡುಪಿ: ಅಗ್ನಿ ದುರಂತ; ಚಿಕಿತ್ಸೆ ಫಲಿಸದೆ ಉದ್ಯಮಿ ರಮಾನಂದ ಶೆಟ್ಟಿ ಪತ್ನಿ ನಿಧನ
ಉಡುಪಿ: ಉಡುಪಿಯ ಅಂಬಲಪಾಡಿಯ ಗಾಂಧಿನಗರದ ಮನೆಯೊಂದರಲ್ಲಿ ನಡೆದ ಅಗ್ನಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾರ್ ಮಾಲೀಕ ರಮಾನಂದ ಶೆಟ್ಟಿ ಅವರ ಪತ್ನಿ ಅಶ್ವಿನಿ (43) ಅವರು ಚಿಕಿತ್ಸೆ ಫಲಿಸದೆ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅಂಬಲಪಾಡಿಯ ಶೆಟ್ಟಿ ಬಾರ್ & ರೆಸ್ಟೋರೆಂಟ್‌ನ ಮಾಲೀಕರಾಗಿರುವ ರಮಾನಂದ ಶೆಟ್ಟಿ ಅವರ ಮನೆಯಲ್ಲಿ ಸೋಮವಾರ ಮುಂಜಾನೆ ಅಗ್ನಿ ಅವಘಡ ಸಂಭವಿಸಿತ್ತು. ಮನೆಯಲ್ಲಿ ಆವರಿಸಿದ್ದ ದಟ್ಟಹೊಗೆಯಿಂದ ಉಸಿರುಗಟ್ಟಿ ರಮಾನಂದ ಶೆಟ್ಟಿ ಅವರು ನಿನ್ನೆ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರ ಪತ್ನಿ ಅಶ್ವಿನಿ ಅವರು ಮಣಿಪಾಲ […]