ಉಡುಪಿ: ಇಂದು ಪರ್ಯಾಯ ಪಂಚ ಶತಮಾನೋತ್ಸವ; ಸಿಎಂ ಯಡಿಯೂರಪ್ಪನವರಿಂದ ‘ವಿಶ್ವಪಥ’ಕ್ಕೆ ಚಾಲನೆ

ಉಡುಪಿ: ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಅದಮಾರು ಮಠ ವತಿಯಿಂದ ಪರ್ಯಾಯ ಪಂಚ ಶತಮಾನೋತ್ಸವ(500 ವರ್ಷ)ದ ಅಂಗವಾಗಿ ಇಂದು (ಜ.18) ನಡೆಯುವ ಕಾರ್ಯಕ್ರಮದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಭಾಗವಹಿಸಲಿದ್ದು, ದೇವರ ದರ್ಶನಕ್ಕೆ ಭಕ್ತರಿಗಾಗಿ ನಿರ್ಮಿಸಲಾದ ನೂತನ ‘ವಿಶ್ವಪಥ’ ಸರತಿ ಸಾಲನ್ನು ಸಿಎಂ ಉದ್ಘಾಟಿಸಲಿದ್ದಾರೆ ಎಂದು ಪರ್ಯಾಯ ಅದಮಾರು ಮಠದ ವ್ಯವಸ್ಥಾಪಕ ಗೋವಿಂದರಾಜ್ ತಿಳಿಸಿದ್ದಾರೆ. ಅಂದು ಸಂಜೆ 5 ಗಂಟೆಗೆ ಸಿಎಂ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ವಿಶ್ವಪಥವನ್ನು ಉದ್ಘಾಟಿಸುವರು. ಸಂಜೆ 5.15ಕ್ಕೆ ದೇವರ ದರ್ಶನ ಪಡೆಯಲಿದ್ದು, ಇದೇ […]