ಉಡುಪಿ: ಬಹುದಿನಗಳ ನಂತರ ಮತ್ತೆ ರಂಗ ಚಟುವಟಿಕೆ ಆರಂಭ
ಉಡುಪಿ: ಕೊರೊನಾ ಹಿನ್ನೆಲೆಯಲ್ಲಿ ಸ್ತಬ್ದವಾಗಿದ್ದ ರಂಗ ಚಟುವಟಿಕೆ ಉಡುಪಿಯಲ್ಲಿ ಮತ್ತೆ ಆರಂಭವಾಯಿತು. ಮಣಿಪಾಲದ ನಿರ್ಮಿತಿ ಕೇಂದ್ರದ ಸುಂದರ ಪರಿಸರದಲ್ಲಿ ಭಾನುವಾರ ರಸಿಕರತ್ನ ವಿಟ್ಲ ಜೋಶಿ ಪ್ರತಿಷ್ಠಾನ ಪರ್ಕಳ, ನಿರ್ಮಿತಿ ಕೇಂದ್ರ, ಮಣಿಪಾಲ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಇವರ ಸಹಕಾರ ದೊಂದಿಗೆ ಶಿಲ್ಪಾ ಜೋಶಿಯವರ ಏಕವ್ಯಕ್ತಿ ರಂಗಪ್ರಯೋಗ ಪ್ರದರ್ಶನಗೊಂಡು ಜನ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಭಾವಗೀತೆಗಳ ಭಾವಸಂಜೆಯಲ್ಲಿ ಉಡುಪಿಯ ಕಲಾವಿದರಾದ ರೇಖಾ ಸಾಮಗ, ಡಾ. ಪ್ರತಿಮಾ, ಡಾ. ಪ್ರಜ್ಞಾ ಮಾರ್ಪಳ್ಳಿ ಹಾಗೂ ರಂಜನಿ ಸುಂದರ […]