ಉಡುಪಿ:ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಜೋಡಿ ಚಂಡಿಕಾಯಾಗ ಸಂಪನ್ನ
ಉಡುಪಿ: ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಶರನ್ನವರಾತ್ರಿಯ 4ನೇ ದಿನವೂ ಕೂಡ ಜೋಡಿ ಚಂಡಿಕಾ ಯಾಗ ಸಂಪನ್ನಗೊಂಡಿತು. ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಹಾಗೂ ನೇತೃತ್ವದಲ್ಲಿ ಮುಂಬೈಯ ಸಂತೋಷ್ ಜನ್ನ ಮತ್ತು ಶ್ರೀಮತಿ ರಜಿತಾ ಸಂತೋಷ್ ಜನ್ನಾ ದಂಪತಿಗಳು ಹಾಗೂ ಶಿವಮೊಗ್ಗದ ಶ್ರೀ ಸುದೀಪ್ ಮತ್ತು ಶ್ರೀಮತಿ ಪ್ರೀತಿ ಸುದೀಪ್ ದಂಪತಿಗಳಿಂದ ಕೃತಜ್ಞತಾ ಪೂರ್ವಕವಾಗಿ ಈ ಸೇವೆ ಏಕಕಾಲದಲ್ಲಿ ಸಮರ್ಪಿಸಲ್ಪಟ್ಟಿತು.. […]