ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ನಿಂದ ‘ಆಟಿದ ಕೂಟ’ ಆಯೋಜನೆ

ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ ಭವನ ಸದಾ ರಾಜಕೀಯ ಚಟುವಟಿಕೆಗಳಿಂದ ಕೂಡಿರುತ್ತದೆ. ಆದರೆ ಇಂದು ಅಲ್ಲಿನ ದೃಶ್ಯ ಭಿನ್ನವಾಗಿತ್ತು.ಮಹಿಳಾ ಕಾಂಗ್ರೆಸ್ ವತಿಯಿಂದ ‘ಆಟಿದ ಕೂಟ’ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕರಾವಳಿಯ ಆಟಿ ತಿಂಗಳ ಆಟ, ಹಾಡು, ನೃತ್ಯದ ವೈವಿಧ್ಯತೆ ಮತ್ತು ಅಡುಗೆ ರುಚಿಯನ್ನು ಈ ತಲೆಮಾರಿಗೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಕುಣಿದು ಕುಪ್ಪಳಿಸಿದರು. ಹಾಡು ಹೇಳಿ ಖುಷಿಪಟ್ಟರು. ಹಾಸ್ಯ ಚಟಾಕಿ ಹಾರಿಸಿದರು. ಕೊನೆಯಲ್ಲಿ ಬಗೆಬಗೆಯ ಆಟಿ ತಿಂಗಳ ಭಕ್ಷ್ಯ ಭೋಜನಗಳನ್ನು ಸವಿದರು. […]