ಉಡುಪಿ: ಎಚ್.ಆರ್.ಎಸ್ ಉಡುಪಿ ವತಿಯಿಂದ ನೂತನ ಆ್ಯಂಬುಲೆನ್ಸ್ ಲೋಕಾರ್ಪಣೆ
ಉಡುಪಿ: ಕಳೆದ ಹದಿನೇಳು ವರ್ಷದಿಂದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕಾರ್ಯಚರಿಸುವ ಸರಕಾರೇತರ ಸೇವಾ ಸಂಸ್ಥೆ ಎಚ್.ಆರ್.ಎಸ್ ವತಿಯಿಂದ ಇಂದು ಆ್ಯಂಬುಲೆನ್ಸ್ ಅನ್ನು ಲೋಕಾರ್ಪಣೆ ಮಾಡಲಾಯಿತು. ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ರೆಸಿಡೆನ್ಸ್ ಡಾಕ್ಟರ್ ಚಂದ್ರಶೇಖರ್ ಅಡಿಗ, ಸರ್ಜನ್ ಸುದೇಶ್ ಕುಮಾರ್ ಅಂಬ್ಯುಲೆನ್ಸ್ ನ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಚಂದ್ರಶೇಖರ್ ಅಡಿಗ ಅವರು, ಕೊರೊನಾ ಸೋಂಕು ಈ ದೇಶದ ಜನರ ಮೇಲೆ ಬಹಳಷ್ಟು ಪರಿಣಾಮ ಬೀರಿತ್ತು. ಈ ಸಂದರ್ಭದಲ್ಲಿ ಎಚ್.ಆರ್.ಎಸ್ ಸಂಸ್ಥೆ ಕೈಜೋಡಿಸಿ ನಮ್ಮೊಂದಿಗೆ […]