ಉಡುಪಿ: ವಿವಾಹಿತ ಮಹಿಳೆ ನಾಪತ್ತೆ
ಉಡುಪಿ: ಮನೆಯಿಂದ ಹೊರಗೆ ಹೋದ ವಿವಾಹಿತ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಬೈಂದೂರು ತಾಲೂಕಿನ ಮುದೂರು ಗ್ರಾಮದ ಹಾಲಬೇರು ಎಂಬಲ್ಲಿ ನಡೆದಿದೆ. ಮುದೂರು ಗ್ರಾಮದ ಹಾಲಬೇರು ನಿವಾಸಿ 35 ವರ್ಷದ ಜ್ಯೋತಿ ನಾಪತ್ತೆಯಾದ ಮಹಿಳೆ. ಇವರು ಡಿಸೆಂಬರ್ 19 ರಂದು ರಾತ್ರಿ 8 ಗಂಟೆಯ ಸುಮಾರಿಗೆ ಮನೆಯಿಂದ ಹೊರ ಹೋದವರು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಚಹರೆ: 135 ಸೆಂ.ಮೀ. ಎತ್ತರ, ಗೋಧಿ ಮೈಬಣ್ಣ, ದಪ್ಪ ಶರೀರ, […]