ಉಡುಪಿ: ಬ್ಯಾಂಕ್ ನಲ್ಲಿ ಹಣ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರ ಚಿನ್ನದ ಬಳೆಗಳನ್ನು ದೋಚಿದ ವಂಚಕ

ಉಡುಪಿ: ನಗರದ ಮಿತ್ರಪ್ರಿಯ ಆಸ್ಪತ್ರೆಯ ಬಳಿ ವಂಚಕನೊಬ್ಬ ಮಹಿಳೆಯಿಂದ ಚಿನ್ನದ ಬಳೆಗಳನ್ನು ದೋಚಿದ ಘಟನೆ ಸೋಮವಾರ ನಡೆದಿದೆ. ಮುದರಂಗಡಿಯ ಹಲಸಿನಕಟ್ಟೆಯ ನಿವಾಸಿ 63 ವರ್ಷದ ಸರೋಜಾ ಆಭರಣ ಕಳೆದುಕೊಂಡವರು. ಇವರು ಸೋಮವಾರ ಚಿಕಿತ್ಸೆಗಾಗಿ ಉಡುಪಿಯ ಕಲ್ಪನ ಚಿತ್ರಮಂದಿರದ ಬಳಿಯ ಕ್ಲಿನಿಕ್‌ವೊಂದಕ್ಕೆ ಬಂದಿದ್ದರು. ಈ ವೇಳೆ ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ನಾನು ಕರ್ಣಾಟಕ ಬ್ಯಾಂಕ್ ಉದ್ಯೋಗಿ, ರಾಜೇಶ್ ರಾಮಣ್ಣ ಭಂಡಾರಿಯ ಮಗನೆಂದು ಪರಿಚಯ ಮಾಡಿಕೊಂಡ ಆತ, ಕರ್ನಾಟಕ ಬ್ಯಾಂಕ್‌ನಲ್ಲಿ ಬ್ಯಾಂಕಿನಲ್ಲಿ ಬಡವರಿಗೆ 17 ಸಾವಿರ ಹಣ ಕೊಡುತ್ತಿದ್ದಾರೆ […]