ಬೇಕರಿ ತೆರೆಯಲು ಅನುಮತಿ ನೀಡುವಂತೆ ಶಾಸಕ ರಘುಪತಿ ಭಟ್ ಮನವಿ
ಉಡುಪಿ: ಕೋವಿಡ್ – 19 ನಿಯಂತ್ರಣ ಸಂಬಂಧ ರಾಜ್ಯದಲ್ಲಿ ಲಾಕ್‌ಡೌನ್ ಹೇರಿರುವುದರಿಂದ ಜಿಲ್ಲೆಯಲ್ಲಿ ಅಗತ್ಯವಸ್ತುಗಳನ್ನು ಹೊರತುಪಡಿಸಿ ಇತರ ಎಲ್ಲಾ ವ್ಯವಹಾರಗಳನ್ನು ನಡೆಸದಂತೆ ಆದೇಶ ಹೊರಡಿಸಲಾಗಿತ್ತು. ಆದರೆ ರೋಗಿಗಳಿಗೆ ಉಪಯೋಗವಿರುವ ಕೆಲವೊಂದು ಬೇಕರಿ ಉತ್ಪನ್ನಗಳ ಅವಶ್ಯಕತೆ ಇದ್ದುದರಿಂದ ಆಹಾರೋತ್ಪಾದನೆ ಅಡಿಯಲ್ಲಿ ಬೇಕರಿ ಉತ್ಪನ್ನಗಳನ್ನು ಉತ್ಪಾದಿಸಲು ಅನುಮತಿ ನೀಡಿ ಅಗತ್ಯ ವಸ್ತುಗಳ ಖರೀದಿಗೆ ನೀಡಿರುವ ಸಮಯಾವಕಾಶದಲ್ಲಿ ಬೆಳಿಗ್ಗೆ 6.00 ರಿಂದ 10.00 ರ ವರೆಗೆ ಬೇಕರಿಗಳನ್ನು ತೆರೆಯಲು ಅನುಮತಿ ನೀಡುವಂತೆ ಇಂದು ದಿನಾಂಕ 24-05-2021 ಶಾಸಕ ರಘುಪತಿ ಭಟ್ ಅವರು […]