ಉಡುಪಿ: ಮೊಬೈಲ್ ನಲ್ಲಿ ಆಡಬೇಡವೆಂದು ಬುದ್ಧಿವಾದ ಹೇಳಿದಕ್ಕೆ ಬಾಲಕ ಆತ್ಮಹತ್ಯೆ
ಉಡುಪಿ: ಪೋಷಕರು ಮೊಬೈಲ್‌ನಲ್ಲಿ ಗೇಮ್ ಆಡಬೇಡವೆಂದು ಬುದ್ಧಿಮಾತು ಹೇಳಿದ ಕಾರಣಕ್ಕಾಗಿ ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿಜೂರು ಗ್ರಾಮದ ಹೊಸ್ಕೋಟೆ ಎಂಬಲ್ಲಿ ನಡೆದಿದೆ. ಉಪ್ಪುಂದದ 8ನೇ ತರಗತಿಯ ವಿದ್ಯಾರ್ಥಿ ರೋಹನ್ (14) ಆತ್ಮಹತ್ಯೆಗೆ ಶರಣಾದ ಬಾಲಕ. ಈತ ಸದಾ ಮನೆಯ ರೂಮಿನಲ್ಲಿ ಏಕಾಂಗಿಯಾಗಿ ಇರುತ್ತಿದ್ದು, ಯಾವಾಗಲೂ ಮೊಬೈಲ್ ನಲ್ಲಿ ಗೇಮ್ ಆಡುತ್ತಿದ್ದನು. ಇದಕ್ಕೆ ಮನೆಯವರು ಮೊಬೈಲ್ ನಲ್ಲಿ ಗೇಮ್ ಆಡಬಾರದು, ಓದಿನ ಕಡೆ ಗಮನ ಕೊಡಬೇಕೆಂದು ಬುದ್ಧಿಮಾತು ಹೇಳಿದ್ದರು. ಇದೇ ವಿಚಾರಕ್ಕೆ ಕೋಪಗೊಂಡು ರೋಹನ್ ಮನೆಯಲ್ಲಿ ನೇಣು […]