ಉಡುಪಿ: ಕರಂಬಳ್ಳಿ ದೇಗುಲದ ಅನ್ನಛತ್ರ, ಪ್ರವಾಸಿಗರ ವಸತಿ ನಿರ್ಮಾಣಕ್ಕೆ ₹4 ಕೋಟಿ ಮಂಜೂರು: ಸಿಎಂ ಯಡಿಯೂರಪ್ಪ ಭರವಸೆ
ಉಡುಪಿ: ಕರಂಬಳ್ಳಿ ವೆಂಕಟರಮಣ ದೇಗುಲದಲ್ಲಿ ದಿ. ವಿ.ಎಸ್. ಆಚಾರ್ಯರ ಹೆಸರಿನಲ್ಲಿ ಅನ್ನಛತ್ರ ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ವಸತಿ ಮಾಡುವ ಯೋಜನೆಗೆ ತಗಲುವ ನಾಲ್ಕು ಕೋಟಿ ರೂಪಾಯಿಗಳನ್ನು ಒಂದು ವಾರದೊಳಗೆ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು. ಉಡುಪಿ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಸೋಮವಾರ ನಡೆದ ಧರ್ಮಸಭೆಯಲ್ಲಿ ಅವರು ಮಾತನಾಡಿದರು. ಧರ್ಮ ರಕ್ಷಣೆ ಮಾಡುವವರು ಧರ್ಮ ರಕ್ಷಕರು. ಈ ಮಾತಿನಲ್ಲಿ ಭಾರತೀಯರಿಗೆ ಅಚಲವಾದ ನಂಬಿಕೆ ಇದೆ. ಸತ್ಯ, ಅಹಿಂಸೆ, […]