ಚೈಲ್ಡ್ ಲೈನ್-1098 ವತಿಯಿಂದ ವಿಶ್ವ ಮಾನವ ಕಳ್ಳ ಸಾಗಣಿಕೆ ತಡೆ ದಿನಾಚರಣೆ ಅರಿವು ಕಾರ್ಯಕ್ರಮ

ಉಡುಪಿ: ಚೈಲ್ಡ್ ಲೈನ್-1098 ವತಿಯಿಂದ ವಿಶ್ವ ಮಾನವ ಕಳ್ಳ ಸಾಗಣಿಕೆ ತಡೆ ದಿನಾಚರಣೆಯ ಪ್ರಯುಕ್ತ ಇಂದಿರಾ ನಗರದ ಸರಕಾರಿ ಪ್ರೌಢಶಾಲೆ ಯ ವಿದ್ಯಾರ್ಥಿಗಳಿಗೆ ಮಕ್ಕಳ ಕಳ್ಳ ಸಾಗಾಣಿಕೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಉಡುಪಿ ಚೈಲ್ಡ್ ಲೈನ್-1098 ನ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ರೈಲ್ವೆ ರಕ್ಷಣಾ ಪಡೆ ಇನ್ಸಪೆಕ್ಟರ್ ಪಿ.ವಿ ಮಧುಸೂದನ್ ಮಾತನಾಡಿ, ವಿದ್ಯಾರ್ಥಿಗಳಿಗೆ ಮಕ್ಕಳ ಕಳ್ಳ ಸಾಗಾಣಿಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದರು. ಮಕ್ಕಳು ಕಡ್ಡಾಯವಾಗಿ […]
ಉಡುಪಿ ನಗರಸಭೆ: ಹರ್ ಘರ್ ತಿರಂಗ ಅಭಿಯಾನ ಕುರಿತು ಮಾಹಿತಿ ಕಾರ್ಯಾಗಾರ

ಉಡುಪಿ: ಭಾರತ ಸ್ವಾತಂತ್ರ್ಯದ 75 ರ ಸಂಭ್ರಮವನ್ನು ವೈವಿಧ್ಯಮಯವಾಗಿ ಆಚರಿಸುವ ಸಲುವಾಗಿ ಕೇಂದ್ರ ಸರ್ಕಾರವು ಹರ್ ಘರ್ ತಿರಂಗ ಅಭಿಯಾನವನ್ನು ಹಮ್ಮಿಕೊಂಡಿದ್ದು, ಈ ಅಭಿಯಾನವನ್ನು ನಗರಸಭಾ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ಜಿಲ್ಲಾ ಭಾರತ್ ಸೇವಾದಳದ ವತಿಯಿಂದ ಆಗಸ್ಟ್ 1 ರಂದು ಮಧ್ಯಾಹ್ನ 3.30 ಕ್ಕೆ ನಗರಸಭೆಯ ಸತ್ಯಮೂರ್ತಿ ಸಭಾಭವನದಲ್ಲಿ ಧ್ವಜ ಹಾಗೂ ಧ್ವಜಾರೋಹಣ ಕುರಿತು ಮಾಹಿತಿ ಕಾರ್ಯಾಗಾರ ನಡೆಯಲಿದ್ದು, ನಗರಸಭಾ ವ್ಯಾಪ್ತಿಯ ಸಂಘ-ಸಂಸ್ಥೆಗಳ, ಸ್ವ-ಸಹಾಯ ಸಂಘಗಳ ಹಾಗೂ ನಿರಂತರ ಉಳಿತಾಯ ಗುಂಪುಗಳ ಮುಖ್ಯಸ್ಥರು ಕಡ್ಡಾಯವಾಗಿ ಭಾಗವಹಿಸುವಂತೆ […]
ಉಡುಪಿಯ ಪುತ್ತಿಗೆ ಮಠದಲ್ಲಿ 7 ಲಕ್ಷ ರೂ. ಮೌಲ್ಯದ ಚಿನ್ನದ ಗಿಂಡಿ ಕಳವು: ದೂರು ದಾಖಲು

ಉಡುಪಿ : ಇಲ್ಲಿನ ಪುತ್ತಿಗೆ ಮಠದಲ್ಲಿ 7 ಲಕ್ಷ ರೂ. ಮೌನ್ಯದ ಚಿನ್ನದ ಗಿಂಡಿ ಕಳವಾಗಿರುವ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣದ ವಿವರ: ಜು.26 ರಂದು ಬೆಳಿಗ್ಗೆ ಮಠದಲ್ಲಿ ಪೂಜೆಯ ಸಂದರ್ಭದಲ್ಲಿ ಮಠದ 6 ವಿದ್ಯಾರ್ಥಿಗಳು ಮತ್ತು ಪುರೋಹಿತರು ಬಂದು ಹೋಗಿದ್ದು, ಪೂಜೆಯ ನಂತರ ಪೂಜಾ ಸಾಮಾಗ್ರಿಗಳನ್ನು ತೆಗೆದಿಡುವ ಸಂದರ್ಭದಲ್ಲಿ 7 ಲಕ್ಷ ರೂಪಾಯಿ ಮೌಲ್ಯದ 146 ಗ್ರಾಂ ತೂಕದ ಚಿನ್ನದ ಗಿಂಡಿ ಕಾಣೆಯಾಗಿದ್ದು ಗಮನಕ್ಕೆ ಬಂದಿದೆ. ಮಠದ ವ್ಯವಸ್ಥಾಪಕರಾದ ವಿಷ್ಣುಮೂರ್ತಿ ಅವರು […]
ಶ್ರೀಕೃಷ್ಣಮಠ: ಶ್ರಾವಣ ಶನಿವಾರ ಪ್ರಯುಕ್ತ ಶ್ರೀಕೃಷ್ಣನಿಗೆ ವಿಚಾರ ಶ್ರೀನಿವಾಸ ಅಲಂಕಾರ

ಉಡುಪಿ: ಶ್ರೀಕೃಷ್ಣಮಠದಲ್ಲಿ ಶ್ರಾವಣ ಶನಿವಾರದ ಪ್ರಯುಕ್ತ ಶ್ರೀಕೃಷ್ಣದೇವರಿಗೆ ಕಾಣಿಯೂರು ಮಠಾಧೀಶರು “ವಿಚಾರ ಶ್ರೀನಿವಾಸ” ಅಲಂಕಾರ ಮಾಡಿ, ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.
ಕಡಿಯಾಳಿ: ಆಗಸ್ಟ್ 5ರಂದು ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ಹಾಗೂ ಸಾಮೂಹಿಕ ಕುಂಕುಮಾರ್ಚನೆ

ಉಡುಪಿ: ವಿಶ್ವ ಹಿಂದೂ ಪರಿಷತ್ , ಮಾತೃ ಮಂಡಳಿ ಕಡಿಯಾಳಿ ಇದರ ಜಂಟಿ ಆಶ್ರಯದಲ್ಲಿ 38 ನೇ ವರ್ಷದ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ಹಾಗೂ ಸಾಮೂಹಿಕ ಕುಂಕುಮಾರ್ಚನೆಯು ಆಗಸ್ಟ್ 5ರಂದು ಸಂಜೆ 4.30 ಕೆ ಕಾತ್ಯಾಯಿನಿ ಮಂಟಪ ದಲ್ಲಿ ಜರುಗಲಿದೆ.