ಉಡುಪಿ: ಮಲಬಾರ್ ಗೋಲ್ಡ್ ನಿಂದ 9 ವಸತಿರಹಿತ ಕುಟುಂಬಗಳಿಗೆ ₹ 7 ಲಕ್ಷ ಸಹಾಯಧನ ವಿತರಣೆ

ಉಡುಪಿ: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ವತಿಯಿಂದ ಸಿಎಸ್ ಆರ್ ಯೋಜನೆಯಡಿಯಲ್ಲಿ ಒಂಭತ್ತು ಅರ್ಹ ವಸತಿ ರಹಿತ ಕುಟುಂಬಗಳಿಗೆ ಒಟ್ಟು ₹ 7 ಲಕ್ಷ ಮೊತ್ತದ ಸಹಾಯಧನವನ್ನು ಇಂದು ಸಂಸ್ಥೆಯ ಉಡುಪಿ ಶಾಖೆಯಲ್ಲಿ ವಿತರಣೆ ಮಾಡಲಾಯಿತು. ಫಲಾನುಭವಿಗಳಿಗೆ ಚೆಕ್ ವಿತರಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗ ಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಮನುಷ್ಯ ಹಣ, ಶ್ರೀಮಂತಿಕೆಯ ಒಟ್ಟಿಗೆ ಹೃದಯ ಶ್ರೀಮಂತಿಕೆಯನ್ನು ಬೆಳೆಸಿಕೊಳ್ಳಬೇಕು. ಬದುಕಿನಲ್ಲಿ ಶಾಂತಿ, ನೆಮ್ಮದಿ ಬಹಳ ಮುಖ್ಯ. ಇದು ಮನುಷ್ಯನನ್ನು ಬಹಳ […]