ಉಡುಪಿ ಸೀರೆ ಪುನಶ್ಚೇತನಗೈದ ಕದಿಕೆ ಟ್ರಸ್ಟ್ ಗೆ ನಬಾರ್ಡ್ ನಿಂದ ಸಿಕ್ಕಿತು ರಾಷ್ಟ್ರಮಟ್ಟದ ಹೆಗ್ಗಳಿಕೆ
ಕಾರ್ಕಳ: ಕಳೆದ ಮೂರುವರೆ ವರ್ಷಗಳಿಂದ ಅಳಿವಿನಂಚಿನಲ್ಲಿದ್ದ ಉಡುಪಿ ಸೀರೆ ನೇಕಾರಿಕೆ ಪುನಶ್ಚೇತನಕ್ಕೆ ಶ್ರಮಿಸುತ್ತಿರುವ ಕದಿಕೆ ಟ್ರಸ್ಟ್ ಈ ಸಲದ ನಬಾರ್ಡ್ ಮುಂಬೈ ಮುಖ್ಯ ಕಚೇರಿಯಿಂದ ಕೈಮಗ್ಗ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಂಸ್ಥೆಗಳಲ್ಲಿ ಒಂದು ಎಂಬುದಾಗಿ ರಾಷ್ಟ್ರ ಮಟ್ಟದಲ್ಲಿ ಆಯ್ಕೆ ಆಗಿದೆ. ಆಗಸ್ಟ್ 6 ರಂದು ನಡೆದ ಈ ಆನ್ಲೈನ್ ಕಾರ್ಯಕ್ರಮದಲ್ಲಿ ಕೊಡಲಾದ ಈ ಪ್ರಶಸ್ತಿಯನ್ನು ಆ.16 ರಂದು ಕಿನ್ನಿಗೋಳಿಯ ತಾಳಿಪಾಡಿ ನೇಕಾರ ಸಂಘದಲ್ಲಿ ನಡೆದ ರಾಷ್ಟ್ರೀಯ ಕೈಮಗ್ಗ ಸಪ್ತಾಹ ಆಚರಣೆಯ ಸಂದರ್ಭದಲ್ಲಿ ದ ಕ ಜಿಲ್ಲಾಧಿಕಾರಿ […]