ಉದ್ಯಾವರ: ಜಿಲ್ಲಾ ಮಟ್ಟದ ಭಜನಾ ಕಮ್ಮಟ, 650ನೇ ದಾಸ ಸಿಂಚನ ಕಾರ್ಯಕ್ರಮ
ಉದ್ಯಾವರ: ಉದ್ಯಾವರ ಶ್ರೀಪ್ರಸನ್ನ ಸೋಮೇಶ್ವರ ದೇವಸ್ಥಾನ ಮತ್ತು ಶ್ರೀಶಂಭು ಶೈಲೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಜಂಟಿ ಆಶ್ರಯದಲ್ಲಿ ಉದ್ಯಾವರದ ಶ್ರೀಶಂಭುಶೈಲೇಶ್ವರ ದೇವಸ್ಥಾನದ ಮಾರ್ಕಂಡೇಯ ವೇದಿಕೆಯಲ್ಲಿ ಉಡುಪಿ ಜಿಲ್ಲಾ ಮಟ್ಟದ ಭಜನಾ ಕಮ್ಮಟ ಮತ್ತು 650ನೇ ದಾಸ ಸಿಂಚನ ಕಾರ್ಯಕ್ರಮ ನಡೆಯಿತು. ಉಡುಪಿ ಜೆಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಲಾವಿದೆ ಮಾಯಾ ಕಾಮತ್ ಮಣಿಪಾಲ ಅವರ ಸಂಯೋಜನೆಯಲ್ಲಿ ನಡೆದ ಕಾರ್ಯಕ್ರಮವನ್ನು ಬಿಎಸ್ಎನ್ಎಲ್ ನಿವೃತ್ತ ಉಪ ಮಹಾಪ್ರಂಬಧಕ ಸುರೇಶ್ ಭಟ್ ಉದ್ಘಾಟಿಸಿದರು. ಶ್ರೀಶಂಭುಶೈಲೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ರಾಘವೇಂದ್ರ ಮಯ್ಯ […]