ಮರಳು ಅಭಾವಕ್ಕೆ ಉಡುಪಿ ಶಾಸಕರೇ ಕಾರಣ: ವಿಶ್ವನಾಥ ಪೇತ್ರಿ ಆರೋಪ
ಉಡುಪಿ: ಜಿಲ್ಲೆಯ ಸಿಆರ್ ಝಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವುಗೊಳಿಸಲು ಪರಿಶಿಷ್ಟ ಜಾತಿಯ ಸಾಂಪ್ರದಾಯಿಕ ಮರಳು ಕಾರ್ಮಿಕರಿಗೆ ಪರವಾನಗಿ ನೀಡಬೇಕೆಂದು ಒತ್ತಾಯಿಸಿಉಡುಪಿ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹೊಯ್ಗೆ ದೋಣಿ ಕಾರ್ಮಿಕರ ಸಂಘದವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಧರಣಿ ನಡೆಸಲಾಯಿತು. ಸಂಘದ ಗೌರವಾಧ್ಯಕ್ಷ ಉದಯ ಕುಮಾರ್ ತಲ್ಲೂರ್ ಮಾತನಾಡಿ, ನಾವು ಜಿಲ್ಲಾಡಳಿತ ಅಥವಾ ಗುಲಾಮಗಿರಿಯ ಪರವಾಗಿ ಪ್ರತಿಭಟನೆ ಮಾಡುತ್ತಿಲ್ಲ. ನಮಗೆಆಗಿರುವ ಅನ್ಯಾಯವನ್ನು ಸಚಿವರಿಗೆ ತಿಳಿಸುವ ಉದ್ದೇಶದಿಂದ ಧರಣಿಗೆಕುಳಿತುಕೊಂಡಿದ್ದೇವೆ. ನೀವು ಓರ್ವ ಶಾಸಕರಾಗಿ (ರಘುಪತಿ ಭಟ್) […]