ಬಿಜೆಪಿ ಗುಂಡಿಬೈಲ್ ಮತ್ತು ನಮೋ ಫ್ರೆಂಡ್ಸ್ ದೊಡ್ಡಣ್ಣಗುಡ್ಡೆ ಜಂಟಿ ಆಶ್ರಯದಲ್ಲಿ ಉಚಿತ ವಿದ್ಯುತ್ ಸಂಪರ್ಕ
ಉಡುಪಿ ಜಿಲ್ಲೆಯ ಗುಂಡಿಬೈಲ್ ವಾರ್ಡ್‌ನಲ್ಲಿ ಇಂದು ವಿದ್ಯುತ್ ವಂಚಿತ ಕುಟುಂಬಕ್ಕೆ ಮತ್ತು ಗೋಶಾಲೆಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ ಬಿಜೆಪಿ ಗುಂಡಿಬೈಲ್ ವಾರ್ಡ್ ಮತ್ತು ನಮೋ ಫ್ರೆಂಡ್ಸ್ ದೊಡ್ಡಣ್ಣಗುಡ್ಡೆ ತಂಡವು ಜನಪರ ಸೇವೆಗೆ ಸಾಕ್ಷಿಯಾಯಿತು. ಮಲ್ಲಂಪಳ್ಳಿ ನಿವಾಸಿ ಶ್ರೀಮತಿ ಕಮಲ ಎಂಬವರ ಮನೆಗೆ ಮತ್ತು ಸಮೀಪದ ಗೋಶಾಲೆಗೆ ಉಚಿತ ವಿದ್ಯುತ್ ಸಂಪರ್ಕ, ನಳ್ಳಿ ನೀರಿನ ವ್ಯವಸ್ಥೆಯ ಉದ್ಘಾಟನೆ, ಉಚಿತ ಗ್ಯಾಸ್ ವಿತರಣಾ ಕಾರ್ಯಕ್ರಮ ಹಾಗೂ ಗುಂಡಿಬೈಲ್ ವಾರ್ಡ್ ಬಿಜೆಪಿಯ ಕಛೇರಿ ಉದ್ಘಾಟನಾ ಸಮಾರಂಭವನ್ನು ರಘುಪತಿ ಭಟ್ […]