ಯು. ಕಮಲಾ ಬಾಯಿ ಶಾಲೆಯ ಹಳೆ ವಿದ್ಯಾರ್ಥಿಗಳ, ಅಧ್ಯಾಪಕರ ಮತ್ತು ಸಿಬ್ಬಂದಿಗಳ ಪುನರ್ ಮಿಲನದ ‘ತ್ರಿವೇಣಿ ಸಂಗಮ’

ಉಡುಪಿ: ಕಡಿಯಾಳಿಯ ಯು.ಕಮಲಾ ಬಾಯಿ ಪ್ರೌಢಶಾಲೆಯಲ್ಲಿಅ.23 ಭಾನುವಾರದಂದು ಶಾಲಾ ನಿವೃತ್ತ ಅಧ್ಯಾಪಕರು, ಹಳೆ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರ ಪುನರ್ ಮಿಲನ ಕಾರ್ಯಕ್ರಮ ‘ತ್ರಿವೇಣಿ ಸಂಗಮ’ ಜರುಗಲಿದೆ. 1965 ರಲ್ಲಿ ಶಾಲೆ ಪ್ರಾರಂಭವಾದ ವರ್ಷದಿಂದ 2021ರ ವರೆಗಿನ ಎಲ್ಲಾ ಹಳೆಯ ವಿದ್ಯಾರ್ಥಿಗಳ ಪುನರ್ ಮಿಲನವು ಈ ಸಂದರ್ಭದಲ್ಲಿ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಮತ್ತೆ ಶಾಲಾ ಗತವೈಭವದ ನೆನಪು ಮರುಕಳಿಸಲಿದೆ. ಕಾರ್ಯಕ್ರಮದ ದಿನದಂದು ಶಾಲೆಯಲ್ಲಿ ಸೇವೆ ಸಲ್ಲಿಸಿದ ಎಲ್ಲರನ್ನು ಗೌರವಿಸಲಾಗುವುದು. ಅಂದಿನ ಕಾರ್ಯಕ್ರಮದ ವಿಶೇಷತೆ # 10.00 ಗಂಟೆಗೆ ಶಾಲೆಯಲ್ಲಿ ಪ್ರಥಮ […]