ಯು. ಕಮಲಾ ಬಾಯಿ ಶಾಲೆಯ ಹಳೆ ವಿದ್ಯಾರ್ಥಿಗಳ, ಅಧ್ಯಾಪಕರ ಮತ್ತು ಸಿಬ್ಬಂದಿಗಳ ಪುನರ್ ಮಿಲನದ ‘ತ್ರಿವೇಣಿ ಸಂಗಮ’

ಉಡುಪಿ: ಕಡಿಯಾಳಿಯ ಯು.ಕಮಲಾ ಬಾಯಿ ಪ್ರೌಢಶಾಲೆಯಲ್ಲಿಅ.23 ಭಾನುವಾರದಂದು ಶಾಲಾ ನಿವೃತ್ತ ಅಧ್ಯಾಪಕರು, ಹಳೆ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರ ಪುನರ್ ಮಿಲನ ಕಾರ್ಯಕ್ರಮ ‘ತ್ರಿವೇಣಿ ಸಂಗಮ’ ಜರುಗಲಿದೆ. 1965 ರಲ್ಲಿ ಶಾಲೆ ಪ್ರಾರಂಭವಾದ ವರ್ಷದಿಂದ 2021ರ ವರೆಗಿನ ಎಲ್ಲಾ ಹಳೆಯ ವಿದ್ಯಾರ್ಥಿಗಳ ಪುನರ್ ಮಿಲನವು ಈ ಸಂದರ್ಭದಲ್ಲಿ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಮತ್ತೆ ಶಾಲಾ ಗತವೈಭವದ ನೆನಪು ಮರುಕಳಿಸಲಿದೆ. ಕಾರ್ಯಕ್ರಮದ ದಿನದಂದು ಶಾಲೆಯಲ್ಲಿ ಸೇವೆ ಸಲ್ಲಿಸಿದ ಎಲ್ಲರನ್ನು ಗೌರವಿಸಲಾಗುವುದು.

ಅಂದಿನ ಕಾರ್ಯಕ್ರಮದ ವಿಶೇಷತೆ

# 10.00 ಗಂಟೆಗೆ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದ ಎಲ್ಲಾ ಹಳೆ ವಿದ್ಯಾರ್ಥಿಗಳಿಗೆ ಮತ್ತು ನಿವೃತ್ತ ಅಧ್ಯಾಪಕರಿಗೆ, ಶಾಲಾ ಬ್ಯಾಂಡ್ ಮೂಲಕ ಸ್ವಾಗತ
# 10.30ಕ್ಕೆ ಶಾಲಾ ಮೈದಾನದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ವಿಜಯೇಂದ್ರ ವಸಂತ ನೇತೃತ್ವದಲ್ಲಿ ಅಸೆಂಬ್ಲಿ
# 11.00 ಕ್ಕೆ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿಧನ ಹೊಂದಿದ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರು ಮತ್ತು ನಿವೃತ್ತ ಅಧ್ಯಾಪಕರಿಗೆ ಭಾವಪೂರ್ಣ ನುಡಿ ನಮನ
# 11.30 ಕ್ಕೆ 1982/1983ರ ಬ್ಯಾಚಿನ ಹಳೆ ವಿದ್ಯಾರ್ಥಿನಿಯರಿಂದ ಗ್ರಾಮ ದೇವತೆಯಾದ ಜಗನ್ಮಾತೆ ಕಡಿಯಾಳಿ ಮಹಿಷ ಮರ್ದಿನಿ ಸ್ತುತಿ
# 11.40ಕ್ಕೆ ಸಭಾ ಕಾರ್ಯಕ್ರಮ ಮತ್ತು ನಿವೃತ್ತರಿಗೆ ಸನ್ಮಾನ

# 12.00 ಗಂಟೆಗೆ ನಿವೃತ್ತ ಮುಖ್ಯೋಪಾಧ್ಯಾಯರಿಂದ ಮಾತು
# 12.30 ಕ್ಕೆ ಅಧ್ಯಾಪಕರೊಂದಿಗೆ ಹಳೆ ನೆನಪುಗಳ ಮೆಲುಕು 1.00 ಗಂಟೆಗೆ ಸೆಲ್ಫಿ ವಿಥ್ ಮೈ ಫೇವರೆಟ್ ಟೀಚರ್
# 1.30 ಕ್ಕೆ ಸಾಂಪ್ರದಾಯಿಕ ತುಳುನಾಡು ಶೈಲಿಯ ಸಸ್ಯಾಹಾರಿ ಊಟ

ಶಾಲಾ ನೆನಪುಗಳನ್ನು ಪುನರ್ ಜೀವಿಸಲು ಶಾಲಾ ಸಮವಸ್ತ್ರದಲ್ಲಿ ಬರಲು ಅವಕಾಶವಿದೆ. ಶಾಲಾ ಮೈದಾನದಲ್ಲಿ ಐಸ್ ಕ್ಯಾಂಡಿ ಡಬ್ಬ, ಚರ್ಮುರಿ ಇನ್ನಿತರ ನಮ್ಮ ಅಂದಿನ ಪ್ರೀತಿಯ ತಿಂಡಿಗಳ(ಆಕುರುಟ್, ಪೆಪ್ಪರ್ ಮಿಠಾಯಿ, ಕಾರಕಡ್ಡಿ ಚುವಿನ್ಗಂ), ಆಹಾರಗಳು ಇರಲಿವೆ.

ಕಳೆದು ಹೋದ ಶಾಲಾ ದಿನಗಳನ್ನು ನೆನಪಿಸಿಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದ್ದು, ಪ್ರತಿಯೊಬ್ಬರೂ ತಪ್ಪದೆ ಹಾಜರಾಗುವಂತೆ ಶಾಲೆಯ ಹಳೆ ವಿದ್ಯಾರ್ಥಿ ರಾಘವೇಂದ್ರ ಕಿಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.