ಸಾಲಿಗ್ರಾಮ ಪ.ಪಂ ಪೌರ ಕಾರ್ಮಿಕರಿಗೆ ತ್ಯಾಜ್ಯ ನಿರ್ವಹಣೆ ಮಾಹಿತಿ
ಉಡುಪಿ, ಜುಲೈ 10: ಪೌರಾಡಳಿತ ನಿರ್ದೇಶನಾಲಯದ ನಿರ್ದೆಶನ ಹಾಗೂ ರಾಷ್ಟ್ರೀಯ ಹಸಿರು ಪೀಠದ ಆದೇಶದಂತೆ, ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ತ್ಯಾಜ್ಯಗಳನ್ನು ಮೂಲದಲ್ಲಿಯೇ ವಿಂಗಡಿಸಿ ಪಡೆದುಕೊಳ್ಳುವುದರ ಬಗ್ಗೆ ಹಾಗೂ ಕಸವನ್ನು ಪರಿಣಾಮಕಾರಿಯಾಗಿ ಎಸ್ಎಲ್ಆರ್ ಎಮ್ ಮಾದರಿಯಂತೆ ಪ್ಲಾಸ್ಟಿಕ್, ಪೇಪರ್, ಬಾಟಲ್, ಕಾರ್ಡು ಬೋರ್ಡು, ರಟ್ಟು ಇತ್ಯಾದಿಗಳನ್ನು ಪ್ರತ್ಯೇಕ ಮಾಡುವ ಕುರಿತು ಮುಖ್ಯಾಧಿಕಾರಿ ಪೌರ ಕಾರ್ಮಿಕರಿಗೆ ಮಾಹಿತಿ ನೀಡಿದರು. ಕಿರಿಯ ಆರೋಗ್ಯ ನರೀಕ್ಷಕರು ಉಪಸ್ಥಿತರಿದ್ದರು.