ಉಕ್ರೇನ್ ದೇಶದ ಬಂಕರ್ ನಲ್ಲಿ ಸಿಲುಕಿಕೊಂಡಿರುವ ಉಡುಪಿಯ ಇಬ್ಬರು ವಿದ್ಯಾರ್ಥಿಗಳು.!
ಉಕ್ರೇನ್ ನಲ್ಲಿ ರಷ್ಯಾ ಸೇನಾ ಪಡೆಯ ದಾಳಿ ಮುಂದುವರಿದ್ದು, ಯುದ್ಧ ಬಾಧಿತ ಉಕ್ರೇನ್‌ನಲ್ಲಿದ್ದ ಉಡುಪಿ ಜಿಲ್ಲೆಗೆ ಸೇರಿದ ಏಳು ಮಂದಿ ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಇಬ್ಬರು ಈಗಾಗಲೇ ಸುರಕ್ಷಿತವಾಗಿ ತಮ್ಮ ತಮ್ಮ ಕುಟುಂಬವನ್ನು ಕೂಡಿಕೊಂಡರೆ, ಮೂವರು ಉಕ್ರೇನ್ ಗಡಿ ದಾಟಿದ್ದು, ತಾಯ್ನಿಡಿಗೆ ಬರುವ ಅವಕಾಶವನ್ನು ಎದುರು ನೋಡುತ್ತಿದ್ದಾರೆ. ಆದರೆ ಇಬ್ಬರು ವಿದ್ಯಾರ್ಥಿಗಳು ಮಾತ್ರ ಇನ್ನೂ ಬಂಕರ್‌ಗಳಲ್ಲಿದ್ದು, ಮುಂದಿನ ನಿರ್ಧಾರಕ್ಕಾಗಿ ಇಲ್ಲಿನ ರಾಯಭಾರ ಕಚೇರಿಯ ಸೂಚನೆಯನ್ನು ಎದುರು ನೋಡುತ್ತಿದ್ದಾರೆ. ಉಕ್ರೇನಿನ ಟೌನ್ ನೇಶನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಕಲಿಯುತ್ತಿರುವ ಕೆಮ್ಮಣ್ಣಿನ 19ವರ್ಷದ […]