ಇಲಿ ಪಾಷಾಣ ತಿಂದು ಎರಡೂವರೆ ವರ್ಷದ ಮಗು ಮೃತ್ಯು
ಉಪ್ಪಿನಂಗಡಿ: ಇಲಿ ಪಾಷಾಣ ತಿಂದು ಎರಡೂವರೆ ವರ್ಷದ ಮಗು ಸಾವನ್ನಪ್ಪಿರುವ ದಾರುಣ ಘಟನೆ ಉಪ್ಪಿನಂಗಡಿ ಯಬಜತ್ತೂರು ಗ್ರಾಮದ ಕೆಮ್ಮಾರ ಎಂಬಲ್ಲಿ ಇಂದು ನಡೆದಿದೆ. ಯಬಜತ್ತೂರು ಗ್ರಾಮದ ಕೆಮ್ಮಾರದ ನಿವಾಸಿಗಳಾದ ನಿವೃತ್ತ ಸೈನಿಕ ಸೈಜು ಹಾಗೂ ದೀಪ್ತಿ ದಂಪತಿ ಪುತ್ರಿ ಶ್ರೇಯಾ(2.5) ಮೃತಪಟ್ಟ ಮಗು. ಮೃತ ಶ್ರೇಯಾ ಇಂದು ಆಟವಾಡುತ್ತಾ, ತಿಳಿಯದೇ ಇಲಿಪಾಷಾಣಾ ತಿಂದಿದ್ದಾಳೆ. ಈ ವಿಚಾರ ಪೋಷಕರಿಗೆ ತಿಳಿಯುತ್ತಿದ್ದಂತೆ ಕೂಡಲೇ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿದೆ. ಈ ಬಗ್ಗೆ […]