ಹಾಲು ಉತ್ಪಾದಕರ ಸಹಕಾರಿ ಸಂಘವನ್ನು ಹೈನುಗಾರರ ವಿವಿಧೋದ್ದೇಶ ಸಹಕಾರಿ ಸಂಘವನ್ನಾಗಿ ಪರಿವರ್ತಿಸಿ: ಬೋಳ ಸದಾಶಿವ ಶೆಟ್ಟಿ ಆಗ್ರಹ
ಉಡುಪಿ: ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಹಾಲು ಉತ್ಪಾದಕರ ಸಹಕಾರಿ ಸಂಘಗಳು ಸ್ವಂತ ಕಟ್ಟಡ ದಲ್ಲಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದ್ದು, ಉಗ್ರಾನ ವ್ಯವಸ್ಥೆಯನ್ನು ಹೊಂದಿರುತ್ತದೆ. ಇಂತಹ ಸಂಘಗಳನ್ನು ವಿವಿಧೋದ್ದೇಶ ಸಹಕಾರಿ ಸಂಘವಾಗಿ ಪರಿವರ್ತಿಸಬೇಕು ಎಂದು ಸಹಕಾರ ಭಾರತಿ ಉಡುಪಿ ಜಿಲ್ಲಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ ಆಗ್ರಹಿಸಿದ್ದಾರೆ. ಅದರ ಮೂಲಕ ಪಡಿತರ ವ್ಯವಸ್ಥೆಯನ್ನು ನೀಡಬೇಕು. ಈ ಬಗ್ಗೆ ಈಗಾಗಲೇ ರಾಷ್ಟ್ರೀಯ ಹೈನು ಅಭಿವೃದ್ಧಿ ನಿಗಮ (NDDB) ಅನುಮತಿಯನ್ನು ಸಹ ನೀಡಿರುತ್ತಾರೆ. ಅಲ್ಲದೆ ದಿನ ಬಳಕೆಯ ಅಗತ್ಯ ವಸ್ತುಗಳ ಗ್ರಾಹಕರ ಅಂಗಡಿಯನ್ನು ತೆರೆಯಲು […]