ಪೇಜಾವರ ಶ್ರೀಗಳಿಂದ ತುಂಗಭದ್ರಾ ಪುಷ್ಕರ ಸ್ನಾನ
ಮಂತ್ರಾಲಯ: ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಮಂತ್ರಾಲಯ ಶ್ರೀ ರಾಘವೇಂದ್ರ ಮಠದ ಸುಬುಧೇಂದ್ರ ತೀರ್ಥ ಶ್ರೀಪಾದರು ತಮ್ಮ ಶಿಷ್ಯರೊಂದಿಗೆ ಶನಿವಾರ ಮಂತ್ರಾಲಯದಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ಬರುವ ಪವಿತ್ರ ತುಂಗಭದ್ರಾ ಪುಷ್ಕರ ತೀರ್ಥಸ್ನಾನ ಮಾಡಿದರು. ಬಳಿಕ ಪೇಜಾವರ ಶ್ರೀಪಾದರು ಗುರುರಾಯರ ದರ್ಶನ ಪಡೆದು ಕೆಲಹೊತ್ತು ರಾಯರ ಸನ್ನಿಧಿಯ ಮುಂಭಾಗ ವಿದ್ಯಾರ್ಥಿಗಳಿಗೆ ಶ್ರೀ ಮನ್ನ್ಯಾಯ ಸುಧಾ ಪಾಠ ಮಾಡಿದರು. ಅಯೋಧ್ಯೆಯ ಶ್ರೀ ರಾಮಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನೆರವೇರುವಂತೆ ಗುರುರಾಯರಲ್ಲಿ ಪ್ರಾರ್ಥನೆ ಸಲ್ಲಿಸಿದರು. ಸುಬುಧೇಂದ್ರತೀರ್ಥರು ಪೇಜಾವರ ಶ್ರೀಗಳನ್ನು ಮಠದ […]