ಶ್ರೀ ಕೃಷ್ಣ ಮಠ ದೇವರಿಗೆ ಶ್ರೀ ಗಳಿಂದ ತುಳಸಿ ಅರ್ಚನೆ, ಮಹಾಪೂಜೆ
ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯಂದು ರಾತ್ರಿ ಕೃಷ್ಣ ದೇವರಿಗೆ ತುಳಸಿ ಅರ್ಚನೆ, ಮಹಾಪೂಜೆಯನ್ನು ನೆರವೇರಿಸಿ ನಂತರ ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಅದಮಾರು ಕಿರಿಯ ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು, ಗರ್ಭಗುಡಿಯೊಳಗೆ ಕೃಷ್ಣ ದೇವರಿಗೆ ಅರ್ಘ್ಯ ನೀಡಿ ಚಂದ್ರೋದಯ ಸಮಯದಲ್ಲಿ ತುಳಸೀಕಟ್ಟೆಯಲ್ಲಿ ಚಂದ್ರನಿಗೆ ಅರ್ಘ್ಯ ನೀಡಿದರು. ನಂತರ ಭಕ್ತಾದಿಗಳಿಂದ ಅರ್ಘ್ಯಪ್ರಧಾನ ನಡೆಯಿತು.