ಭಾರತ, ಚೀನಾ ಗಡಿ ವಿವಾದ: ಸಮಸ್ಯೆ ಬಗೆಹರಿಸಲು ನೆರವು: ಟ್ರಂಪ್
ವಾಷಿಂಗ್ಟನ್: ಭಾರತ ಮತ್ತು ಚೀನಾ ಮಧ್ಯೆ ಉಂಟಾಗಿರುವ ಗಡಿ ವಿವಾದವನ್ನು ಬಗೆಹರಿಸಲು ಸಹಾಯ ಮಾಡುತ್ತೇವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಮೆರಿಕಾದ ಶ್ವೇತಭವನದಲ್ಲಿ ಸುದ್ದಿಗಾರರಲ್ಲಿ ಟ್ರಂಪ್ ಮಾತನಾಡಿದ್ದಾರೆ. ಭಾರತ ಮತ್ತು ಚೀನಾದ ಜತೆ ಸಂಪರ್ಕದಲ್ಲಿದ್ದೇವೆ. ಪರಿಸ್ಥಿತಿ ಕಠಿಣವಾಗಿದೆ. ಅವರು ದೊಡ್ಡ ಸಮಸ್ಯೆಯಲ್ಲಿದ್ದಾರೆ’ ಎಂದಿದ್ದಾರೆ. ‘ಅವರು ಸಂಘರ್ಷಕ್ಕಿಳಿದಿದ್ದು, ಏನಾಗುತ್ತೋ ಎಂದು ಮುಂದೆ ಕಾದುನೋಡೋಣ. ಅವರಿಗೆ ಸಹಾಯ ಮಾಡಲು ನಾವು ಪ್ರಯತ್ನಿಸುತ್ತೇವೆ’ ಎಂದು ಅವರು ತಿಳಿಸಿದ್ದಾರೆ.