ನಾಗಮಂಗಲದ ಕೊರೊನಾ ಸೋಂಕಿತನಿಂದ ಉಡುಪಿಯ ಜನತೆಯೂ ಬೆಚ್ಚಿಬೀಳುವಂತಾಗಿದೆ.!

ಉಡುಪಿ: ನಾಗಮಂಗಲ ತಾಲ್ಲೂಕಿನಲ್ಲಿ ಇಂದು ಓರ್ವ ವ್ಯಕ್ತಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಆತನ ಟ್ರವಲ್ ಹಿಸ್ಟರಿಯಿಂದ ಉಡುಪಿಯ ಜನತೆಯೂ ಬೆಚ್ಚಿಬೀಳುವಂತಾಗಿದೆ. ಈತ ಲಾಕ್ ಡೌನ್ ಮಧ್ಯೆಯೇ ಮುಂಬೈನಿಂದ ಮಂಡ್ಯಕ್ಕೆ ಅಕ್ರಮವಾಗಿ ಬಂದಿದ್ದು, ಇದೀಗ ಆತನಲ್ಲಿ ಸೋಂಕು ಕಾಣಿಸಿಕೊಂಡಿದೆ. ಈತನು ಮುಂಬೈಯಲ್ಲಿ ಹೋಟೆಲ್ ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಏಪ್ರಿಲ್ 22ರಂದು ನಾಗಮಂಗಲಕ್ಕೆ ಬಂದಿದ್ದಾನೆ. ಏಪ್ರಿಲ್ 24ರಂದು ಪರೀಕ್ಷೆ ಮಾಡಲಾಗಿದ್ದು, ಇಂದು ಆತನಿಗೆ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟಿದೆ. ಈ ಸೋಂಕಿತ ಮುಂಬೈಯಿಂದ ಖರ್ಜೂರ ಸಾಗಿಸುವ ಕ್ಯಾಂಟರ್ ನಲ್ಲಿ ಪ್ರಯಾಣ […]