ತ್ರಿಶಾ ವಿದ್ಯಾ ಕಾಲೇಜು ಹಾಗೂ ಎಸ್.ವಿ.ಎಸ್. ವಿದ್ಯಾವರ್ಧಕ ಸಂಘದಿಂದ ಸ್ವಾತಂತ್ರ್ಯ ದಿನಾಚರಣೆ

ಉಡುಪಿ: ಸ್ವಾತಂತ್ರ್ಯದ ಅಮೃತಮಹೋತ್ಸವದ ಅಂಗವಾಗಿ ತ್ರಿಶಾ ವಿದ್ಯಾ ಕಾಲೇಜು ಮತ್ತು ಎಸ್.ವಿ.ಎಸ್. ವಿದ್ಯಾವರ್ಧಕ ಸಂಘ ಇವರು ಜಂಟಿಯಾಗಿ ಸ್ವಾತಂತ್ರ್ಯದ ಅಮೃತಮಹೋತ್ಸವವನ್ನು ಆಚರಿಸಿದರು. ನಿವೃತ್ತ ಮಿಲಿಟರಿ ಪೋಲೀಸ್ ಸುಬೇದಾರ್ ರವೀಂದ್ರ ಪೈ ಧ್ವಜಾರೋಹಣ ನೆರವೇರಿಸಿ ದೇಶಕ್ಕಾಗಿ ಹೋರಾಡುವ ಸೈನಿಕರ ಮಹತ್ವವನ್ನು ತಿಳಿಸಿ ಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತ್ರಿಶಾ ಸಮೂಹ ಸಂಸ್ಥೆಗಳ ಸಂಸ್ಥಾಪಕ ಸಿಎ ಗೋಪಾಲಕೃಷ್ಣ ಭಟ್ ಅವರು ಸ್ವಾತಂತ್ರ್ಯ ಗಳಿಸಿದಂದಿನಿಂದ ಇಂದಿನವರೆಗೆ ದೇಶ ಅಭಿವೃದ್ಧಿ ಹೊಂದಿದ ಪರಿಯನ್ನು ವಿದ್ಯಾರ್ಥಿಗಳಿಗೆ ಹೇಳಿದರು. ಈ ಸಂದರ್ಭದಲ್ಲಿ ಎಸ್.ವಿ.ಎಸ್. ವಿದ್ಯಾವರ್ಧಕ ಸಂಘದ […]

ಮಂಗಳೂರು: ತ್ರಿಶಾ ಕಾಲೇಜ್ ವಿದ್ಯಾರ್ಥಿಗಳಿಂದ ಹರ್ ಘರ್ ತಿರಂಗಾ ಅಭಿಯಾನ

ಮಂಗಳೂರು: ನಮ್ಮ ದೇಶ ಸ್ವತಂತ್ರಗೊಂಡು 75 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದೆ. ಈ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ‘ಹರ್ ಘರ್ ತಿರಂಗಾ’ ಅಭಿಯಾನವು ರಾಷ್ಟ್ರವ್ಯಾಪಿ ನಡೆಯುತ್ತಿದೆ. ಮಂಗಳೂರಿನ ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಎಂಡ್ ಮ್ಯಾನೇಜ್ ಮೆಂಟ್ ಹಾಗೂ ತ್ರಿಶಾ ಸಂಧ್ಯಾ ಕಾಲೇಜ್ ರೆಡ್ ಕ್ರಾಸ್ ಘಟಕ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಈ ಅಭಿಯಾನವನ್ನು ಕೈಗೊಂಡರು. ತ್ರಿಶಾ ಕಾಲೇಜಿನ ರೆಡ್ ಕ್ರಾಸ್ ಘಟಕ ಹಾಗೂ ಎನ್.ಎಸ್.ಎಸ್ ನ ವಿದ್ಯಾರ್ಥಿಗಳು ಕುದ್ರೋಳಿ ಹಾಗೂ ಅಳಕೆಯ ಹಲವಾರು […]

24ನೇ ವರ್ಷದ ತ್ರಿಶಾ ದಿನಾಚರಣೆ: ಎರಡು ದಶಕಗಳಿಗೂ ಹೆಚ್ಚು ಕಾಲ ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ ನಡೆಸಿದ ಸಾಧನೆ

ಉಡುಪಿ: ಬದುಕಿನಲ್ಲಿ ಇದಿರಾದ ಕಾಠಿಣ್ಯವನ್ನೆಲ್ಲಾ ಸವಾಲಾಗಿ ಸ್ವೀಕರಿಸಿ ಎರಡು ದಶಕಗಳಿಗೂ ಹೆಚ್ಚು ಕಾಲ ಸಾವಿರಾರು ವಿದ್ಯಾರ್ಥಿ ಸಂದೋಹವನ್ನು ಸಲಹಿದ ಮತ್ತು ಸಲಹುತ್ತಿರುವ ತ್ರಿಶಾ ಸಂಸ್ಥೆಯು 24 ವರುಷಗಳನ್ನು ಪೂರೈಸಿದ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ತ್ರಿಶಾ ವಿದ್ಯಾ ಕಾಲೇಜು ಕಟಪಾಡಿಯಲ್ಲಿ ಆಯೋಜಿಸಿದ್ದ ತ್ರಿಶಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ತ್ರಿಶಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಸಿ.ಎ ಗೋಪಾಲಕೃಷ್ಣ ಭಟ್, ಈ ಸುಧೀರ್ಘ ಪಯಣದಲ್ಲಿ ಸೋಲು-ಗೆಲುವುಗಳನ್ನು ಜೊತೆ ಸೇರಿಸಿಕೊಂಡು ಮುಂದೆ ಸಾಗುವುದು ಹೇಗೆ ಎನ್ನುವುದನ್ನು ಜೀವನ ಕಲಿಸಿಕೊಟ್ಟಿದೆ ಎಂದು ತಮ್ಮ ಜೀವನದ […]