ಕುಂದಾಪುರ: ತ್ರಿವಳಿ ತಲಾಖ್ ವಿರುದ್ದ ಮೊದಲ ಪ್ರಕರಣ ದಾಖಲು
ಕುಂದಾಪುರ: ಉಡುಪಿ ಜಿಲ್ಲೆಯಲ್ಲಿಯೇ ತ್ರಿವಳಿ ತಲಾಖ್ ವಿರುದ್ಧ ದಾಖಲಾದ ಮೊದಲ ಪ್ರಕರಣಕ್ಕೆ ಕುಂದಾಪುರ ಪೊಲೀಸ್ ಠಾಣೆ ಸಾಕ್ಷಿಯಾಗಿದೆ. ತ್ರಿವಳಿ ತಲಾಖ್ ನೀಡಿದ ಪತಿಯ ವಿರುದ್ಧ ಮುಸ್ಲಿಂ ಮಹಿಳೆಯೊಬ್ಬರು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಂತ್ರಸ್ತೆಯಾದ ಮೂಡುಗೋಪಾಡಿಯ ನಿವಾಸಿ ಅಲ್ಫಿಯಾ ಅಖ್ತರ್ (29) ಎನ್ನುವಾಕೆ ತನ್ನ ಪತಿ ಹಾಗೂ ಆತನ ಕುಟುಂಬಿಕರ ವಿರುದ್ದ ದೂರು ನೀಡಿದ್ದಾರೆ. ಹಿರಿಯಡ್ಕ ನಿವಾಸಿಗಳಾದ ಸಂತ್ರಸ್ತೆ ಪತಿ ಹನೀಫ್ ಸಯ್ಯದ್(32), ಮಾವ ಅಬ್ಬಾಸ್ ಸಯ್ಯದ್, ಅತ್ತೆ ಜೈತುನ್ ಹಾಗೂ ಪತಿಯ ಅಕ್ಕ ಆಯೇಷಾ […]