ತ್ರಿಪಿಠಿಕಾಚಾರ್ಯ’ ಪ್ರೊ. ಪದ್ಮನಾಭ ಶ್ರೀವರ್ಮ ಜೈನಿ ಅಮೇರಿಕಾದಲ್ಲಿ ನಿಧನ
ಉಡುಪಿ: ಬುದ್ಧಿಸ್ಟ್ ಸ್ಟಡೀಸನ ಅತ್ಯುನ್ನತ ತ್ರಿಪಿಟಿಕಾಚಾರ್ಯ ಪದವಿ ಪಡೆದ ಪ್ರೊ. ಪದ್ಮನಾಭ ಶ್ರೀವರ್ಮ ಜೈನಿ ನೆಲ್ಲಿಕಾರು ಅಲ್ಪಕಾಲದ ಅಸೌಖ್ಯದಿಂದ ಇಹಲೋಕ ತ್ಯಜಿಸಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ ಇವರು ಅಮೇರಿಕಾದ ಕ್ಯಾಲಿಫೊರ್ನಿಯಾದಲ್ಲಿ ಸ್ವರ್ಗಸ್ಥರಾಗಿದ್ದಾರೆ. ಪ್ರೊಫೆಸರ್ ಪದ್ಮನಾಭ ಶ್ರೀವರ್ಮ ಜೈನಿ ನೆಲ್ಲಿಕಾರು, ಇವರು ಮೇ 25 ರಂದು ಅಮೇರಿಕಾದ ಕಲಿಫೋರ್ನಿಯಾ ದಲ್ಲಿರುವ ತಮ್ಮ ಸ್ವಗ್ರಹದಲ್ಲಿ ನಿಧನರಗಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು. ಮೂಡಬಿದಿರೆ ತಾಲೂಕು ನೆಲ್ಲಿಕಾರಿನಲ್ಲಿ ಅಕ್ಟೋಬರ್ 23, 1923ರಲ್ಲಿ ಜನಿಸಿದ ದಿ. ಜೈನಿಯವರು, ಬನಾರಸ್ ಹಿಂದೂ ಯೂನಿವರ್ಸಿಟಿ, […]