ಪೆರ್ಡೂರು: ಚಿರತೆ ದಾಳಿಗೆ ಸಾಕು ನಾಯಿ ಬಲಿ
ಉಡುಪಿ: ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶದಲ್ಲಿ ಚಿರತೆಗಳ ಕಾಟ ಹೆಚ್ಚಿದೆ. ಅದರಲ್ಲೂ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಜನವಸತಿ ಪ್ರದೇಶಗಳು ಹೆಚ್ಚು ಆತಂಕದಲ್ಲಿದೆ. ನಾಯಿಗಳ ಬೇಟೆಯಾಡುವ ಚಿರತೆ ಹೆಚ್ಚಾಗಿ ಸಾಕುಪ್ರಾಣಿಗಳನ್ನೇ ಟಾರ್ಗೆಟ್ ಮಾಡುತ್ತವೆ. ಉಡುಪಿಯ ಪೆರ್ಡೂರು ಸಮೀಪ ಇತ್ತೀಚೆಗೆ ಚಿರತೆ ದಾಳಿ ನಡೆದಿದೆ. ಪೆರ್ಡೂರು ಗೋರೇಲಿನಲ್ಲಿ ಹರಿನಾರಾಯಣ ಭಂಡಿ ಅವರ ನಿವಾಸದಲ್ಲಿ ಚಿರತೆಯ ಹಾವಳಿಗೆ ಸಾಕು ನಾಯಿ ಬಲಿಯಾಗಿದೆ. ಚಿರತೆ ನಾಯಿಯನ್ನು ಹೊತ್ತೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಿರತೆ ದಾಳಿಯಿಂದ ಈ ಭಾಗದ ಜನರು ಭಯಭೀತಗೊಂಡಿದ್ದಾರೆ.