ಮಣಿಪಾಲ: ಕೆಎಂಸಿ ಆಸ್ಪತ್ರೆ ಆವರಣದಲ್ಲಿ ಉರುಳಿದ ಮರ: ನಾಲ್ಕು ಕಾರುಗಳು ಜಖಂ
ಮಣಿಪಾಲ: ಮಣಿಪಾಲ ಕೆಎಂಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಸಮೀಪದಲ್ಲಿದ್ದ ಬೃಹತ್ ಹಳೆಯ ಮರವೊಂದು ಶುಕ್ರವಾರ ಅಪರಾಹ್ನ ಉರುಳಿ ಬಿದ್ದ ಪರಿಣಾಮ ನಾಲ್ಕು ಕಾರುಗಳು ಜಖಂ ಆಗಿದೆ. ತುರ್ತು ಚಿಕಿತ್ಸಾ ಘಟಕದ ಎಡ ಬದಿಯ ಪಾರ್ಕಿಂಗ್ ಪ್ರದೇಶದಲ್ಲಿರುವ ಹಳೆಯದಾದ ಮೇ ಫ್ಲವರ್ ಮರ ಹಠತ್ತಾನೆ ಬುಡ ಸಮೇತವಾಗಿ ಧರೆಗೆ ಉರುಳಿ ಬಿತ್ತೆನ್ನಲಾಗಿದೆ. ಇದರಿಂದ ಅದರ ಅಡಿಯಲ್ಲಿ ಪಾರ್ಕ್ ಮಾಡಲಾಗಿದ್ದ ನಾಲ್ಕು ಕಾರುಗಳು ಜಖಂಗೊಂಡಿವೆ. ಎರಡು ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಮತ್ತೆ ಎರಡು ಕಾರುಗಳಿಗೆ ಅಲ್ಪಸ್ವಲ್ಪ ಹಾನಿಯಾಗಿದೆ […]