ಸಂಚಾರಿ ದಂಡ ಪಾವತಿಗೆ ಶೇ 50ರಷ್ಟು ರಿಯಾಯಿತಿ
ಬೆಂಗಳೂರು : ಸಂಚಾರಿ ದಂಡ ಪಾವತಿಗೆ ಶೇ.50ರಷ್ಟು ರಿಯಾಯಿತಿ ಅವಕಾಶವನ್ನು ಮತ್ತೊಮ್ಮೆ ನೀಡಲಾಗಿದ್ದು, ಸೆಪ್ಟೆಂಬರ್ 9ರವರೆಗೂ ದಂಡ ಪಾವತಿಗೆ ಅವಕಾಶವಿರಲಿದೆ. ಸಂಚಾರಿ ದಂಡ ಪಾವತಿಸಲು ಈ ಹಿಂದೆ ನೀಡಲಾಗಿದ್ದ ಅರ್ಧದಷ್ಟು ರಿಯಾಯಿತಿಯನ್ನು ಮತ್ತೊಮ್ಮೆ ಜಾರಿಗೆ ತರುವ ಮೂಲಕ ವಾಹನ ಸವಾರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಇಂದಿನಿಂದ ಶೇ.50ರಷ್ಟು ರಿಯಾಯಿತಿ ದರದಲ್ಲಿ ಸಂಚಾರಿ ದಂಡ ಪಾವತಿ ಮಾಡಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. ಸೆಪ್ಟೆಂಬರ್ 9ರವರೆಗೂ ದಂಡ ಪಾವತಿಗೆ ಅವಕಾಶ ನೀಡಲಾಗಿದೆ. ಆದರೆ, ಕೇವಲ ಫೆಬ್ರವರಿ 11ಕ್ಕೂ […]