ಸಂಚಾರ ಪುನಾರಂಭ : ಆಂಧ್ರ ರೈಲು ದುರಂತ: ಹಳಿಗಳ ಮರುಜೋಡಣೆ
ವಿಜಯನಗರ (ಆಂಧ್ರಪ್ರದೇಶ): ನಿರಂತರ ಕಾರ್ಯಾಚರಣೆಯ ಬಳಿಕ ನಾಶವಾಗಿದ್ದ ಹಳಿಗಳನ್ನು ಸೋಮವಾರ ಮರುಜೋಡಿಸಲಾಗಿದೆ. ಸರಕು ಸಾಗಣೆ ರೈಲಿನ ಬಳಿಕ, ಪ್ರಶಾಂತಿ ಎಕ್ಸ್ಪ್ರೆಸ್ ರೈಲು ಸಂಚಾರ ನಡೆಸಿದವು.ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯಲ್ಲಿ ಒಡಿಶಾದ ಬಾಲಾಸೋರ್ ದುರಂತದ ಮಾದರಿ ನಡೆದ ಪ್ಯಾಸೆಂಜರ್ ರೈಲು ಅಪಘಾತದಲ್ಲಿ 14 ಮಂದಿ ಸಾವಿಗೀಡಾಗಿದ್ದು, 100ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ.ಆಂಧ್ರಪ್ರದೇಶ ರೈಲು ದುರಂತದ ಮಾರ್ಗವನ್ನು ಮರುಸ್ಥಾಪಿಸಲಾಗಿದ್ದು, ಸಂಚಾರ ಪುನಾರಂಭವಾಗಿದೆ. ಸಿಎಂ ಜಗನ್ ಮೋಹನ್ ರೆಡ್ಡಿ ವೈಮಾನಿಕ ಸಮೀಕ್ಷೆ ನಡೆಸಿದರು. ವಿಜಯವಾಡದಿಂದ ಅವರು ವಿಶಾಖಪಟ್ಟಣಕ್ಕೆ ವಿಮಾನದಲ್ಲಿ ಬಂದಿಳಿದರು. ಬಳಿಕ ನೇರವಾಗಿ […]