ಪೇಜಾವರ ಶ್ರೀಗಳಿಂದ ತಮಿಳುನಾಡು ಪ್ರವಾಸ: ವಿವಿಧ ತೀರ್ಥಕ್ಷೇತ್ರಗಳಿಗೆ ಭೇಟಿ
ಚೆನ್ನೈ: ತಮಿಳುನಾಡು ಪ್ರವಾಸದಲ್ಲಿರುವ ಅಯೋಧ್ಯೆ ಶ್ರೀ ರಾಮ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರೂ ಆಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸೋಮವಾರ ತಮಿಳುನಾಡು ರಾಜ್ಯಪಾಲ ಶ್ರೀ ಬನ್ವಾರಿಲಾಲ್ ಪುರೋಹಿತ್ ಅವರನ್ನು ಭೇಟಿ ಮಾಡಿದರು. ಶ್ರೀಗಳನ್ನು ಗೌರವದಿಂದ ಬರಮಾಡಿಕೊಂಡ ರಾಜ್ಯಪಾಲರು, ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವುದಕ್ಕೆ ಅತೀವ ಸಂತಸ ವ್ಯಕ್ತಪಡಿಸಿ ಶ್ರೀಗಳ ಆಗಮನದಿಂದ ರಾಜಭವನ ಪಾವಿತ್ರ್ಯ ವೃದ್ಧಿಸಿತು ಎಂದರು. ಉಭಯ ಕುಶಲೋಪರಿ ನಡೆಸಿದ ಬಳಿಕ ಅಯೋಧ್ಯೆ ರಾಮಮಂದಿರ ಕಾರ್ಯಗಳ ಕುರಿತಾಗಿ ಸಮಾಲೋಚನೆ ನಡೆಸಿದರು. ಶ್ರೀಗಳು ಮಂದಿರ ನಿರ್ಮಾಣದ […]