ಲಾಕ್ ಡೌನ್ ನಿಯಮಾವಳಿ ಸಡಿಲಿಕೆ ಬಗ್ಗೆ ನಾಳೆ ತೀರ್ಮಾನ; ಸಿಎಂ ಯಡಿಯೂರಪ್ಪ
ಬೆಂಗಳೂರು: ಜೂನ್ 21ರ ಬಳಿಕ ಕೋವಿಡ್ ಲಾಕ್‌ಡೌನ್ ನಿಯಮಾವಳಿಗಳಲ್ಲಿ ಸಡಿಲಿಕೆ ಮಾಡಬೇಕೆ ಎಂಬ ಬಗ್ಗೆ ಶನಿವಾರ ತೀರ್ಮಾನ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ರಾಜ್ಯದಲ್ಲಿ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿ. ಇನ್ನೊಂದು ಕಡೆ ಕೋವಿಡ್ 3ನೇ ಅಲೆ ಅಪ್ಪಳಿಸುವ ಭೀತಿಯೂ ಇದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು. 20 ಜಿಲ್ಲೆಗಳಲ್ಲಿ ಜೂ.14 ರಿಂದ ಭಾಗಶಃ ಲಾಕ್‌ಡೌನ್ ತೆರವು ಮಾಡಲಾಗಿತ್ತು. ಉಳಿದ ಜಿಲ್ಲೆಗಳಲ್ಲಿ ಲಾಕ್‌ಡೌನ್ ಮುಂದುವರಿದಿತ್ತು.